ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ದ ಬಲಮುರಿ ಹಾಗೂ ಎಡಮುರಿ ಪ್ರವಾಸಿ ಸ್ಥಳಗಳಲ್ಲಿ ಕಾವೇರಿ ನದಿಯಲ್ಲಿ ಮುಳಗಿ ಸಂಭವಿಸುವ ಸಾವು ತಪ್ಪಿಸುವ ಕ್ರಮವಾಗಿ ಡಿ. 31 ರ ಬೆಳಗ್ಗೆ 6 ಗಂಟೆಯಿಂದ 2020ರ ಜ. 1 ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಲಮುರಿ ಹಾಗೂ ಎಡಮುರಿ ತಾಲೂಕಿನ ಪ್ರಮುಖ ಪ್ರವಾಸ ತಾಣಗಳಾಗಿದ್ದು, ಹೊಸ ವರ್ಷಾಚರಣೆಯಂದು ಭಾರಿ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. 2013 ರಿಂದ ಈವರೆಗೆ ಈ ಎರಡೂ ಪ್ರವಾಸಿ ಸ್ಥಳಗಳಲ್ಲಿ 46 ಮಂದಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆದ್ದರಿಂದ ತಹಶೀಲ್ದಾರ್ ಈ ಆದೇಶ ಹೊರಡಿಸಿದ್ದಾರೆ.