ಬೆಂಗಳೂರು; ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಮಾದರಿಯಲ್ಲಿ ಬಾಗಲಕೋಟೆ ಜಿಲ್ಲೆಯ ಐದು ಗ್ರಾಮಗಳನ್ನು ಸೋಲಾರ್ ಗ್ರಾಮಗಳನ್ನಾಗಿಸುವತ್ತ ಬಸವೇಶ್ವರ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ಹಾಗೂ ಸೆಲ್ಕೋ ಫೌಂಡೇಶನ್ ಮುಂದಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿಯೂ ಉನ್ನತ ಭಾರತ ಯೋಜನೆಯಡಿ ನೀರಲಕೇರಿ, ಮುಚಖಂಡಿ, ಕಿರಸೂರ, ಬೆನಕಟ್ಟಿ ಹಾಗು ರಾಮಥಾಳ ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಈ ಗ್ರಾಮದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಸರ್ವೆ ಮಾಡಿಸಿ, ಅಲ್ಲಿಯ ಎಲ್ಲಾ ಮಾಹಿತಿ ತೆಗೆದುಕೊಂಡು ಜನರಿಗೆ ಅಗತ್ಯವಿರುವ ಯಂತ್ರಗಳನ್ನು ಸೋಲಾರ್ನಲ್ಲಿ ಉಪಯೋಗಿಸುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಚಿತ್ತಸೆಲ್ಕೊ ಫೌಂಡೇಶನ್ ವಿಭಾಗದ ಸಹಾಯಕ ಮ್ಯಾನೇಜರ್ ಸುಧೀರ ಕುಲಕರ್ಣಿ ತಿಳಿಸಿದ್ದಾರೆ.