ಬೆಂಗಳೂರು: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ತಮ್ಮ ಇಹಲೋಕದ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನರಾದರು.
ಇಲ್ಲಿನ ವಿದ್ಯಾಪೀಠ ಆವರಣದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೇಜಾವರ ಶ್ರೀಗಗಳು ಬೃಂದಾವನಸ್ಥರಾದರು.
ಜಪ ಮಾಡುವ ಭಂಗಿಯಲ್ಲಿ ಪದ್ಮಾಸನ ಹಾಕಿಸಿ ಶ್ರೀಗಳನ್ನು ಬೃಂದಾವನದಲ್ಲಿ ಕೂರಿಸಲಾಯಿತು. ನಂತರ, ಅವರು ನಿತ್ಯ ಪೂಜೆಗೆ ಬಳಸುತ್ತಿದ್ದ ನಿತ್ಯ ಪೂಜೆ ಮಾಡುವ ವಿಷ್ಣು ಸಾಲಿಗ್ರಾಮ, ಗಿಂಡಿ, ತುಳಸಿ ಮಾಲೆ , ಪೂಜಾ ಸಾಮಾಗ್ರಿ ಇರಿಸಲಾಯಿತು. ಶ್ರೀಗಳ ಬ್ರಹ್ಮರಂಧ್ರಕ್ಕೆ ತೆಂಗಿನ ಕಾಯಿಯನ್ನು ಇಡಲಾಯಿತು. ಬಳಿಕ ಸಾಸಿವೆ, ಉಪ್ಪು, ಹತ್ತಿ ಬಳಸಿ ಬೃಂದಾವನವನ್ನು ಮುಚ್ಚಲಾಯಿತು. ನಂತರ ಮಣ್ಣಿನಿಂದ ಬೃಂದಾವನವನ್ನು ಮುಚ್ಚಲಾಯಿತು.