ಬೆಂಗಳೂರು: ಶನಿವಾರ ವಿಧಿವಶರಾಗಿದ್ದ ಹಿರಿಯ ಸಂಶೋಧಕ, ಚಿಂತಕ ಡಾ. ಚಿದಾನಂದ ಮೂರ್ತಿಯವರ ಅಂತ್ಯಕ್ರಿಯೆ ಭಾನುವಾರ ಸರ್ಕಾರಿ ಗೌರವಗಳೊಂದಿಗೆ ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಿತು.
ಚಿಮೂ ಆಶಯದಂತೆ ಯಾವುದೇ ಧಾರ್ಮಿಕ ವಿಧಿ-ವಿಧಾನ ನಡೆಸದೆ ಅವರ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸೋಮಣ್ಣ, ಮುನಿರತ್ನ ಮತ್ತಿತರರು ಚಿತಾಗಾರಕ್ಕೆ ಆಗಮಿಸಿ ಚಿಮೂ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆ ಬಳಿಕ ಮಾತನಾಡಿದ ಚಿದಾನಂದಮೂರ್ತಿಯವರ ಪುತ್ರ ವಿನಯಕುಮಾರ್, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಬೆಂಗಳೂರಲ್ಲಿ ನೆರವೇರಿದ ಚಿಮೂ ಅಂತ್ಯಕ್ರಿಯೆ
Follow Us