ಬೆಂಗಳೂರು: ಮುಂಬೈ, ದೆಹಲಿ, ಕೋಲ್ಕತ, ಚೆನ್ನೈ, ಕೊಚ್ಚಿಗಳಲ್ಲಿ ಮಾತ್ರ ಇರುವ ವಿದೆಶಿ ಅಂಚೆ ಕಚೇರಿ ಸೌಲಭ್ಯ ಈಗ ಬೆಂಗಳೂರಲ್ಲೂ ಲಭ್ಯ.
ಅಂತಾರಾಷ್ಟ್ರೀಯ ಸರಕು ಸಾಗಣೆಗೆ ಅನುಕೂಲ ಕಲ್ಪಿಸಲು ಅಂಚೆ ಇಲಾಖೆ ಕರ್ನಾಟಕ ವೃತ್ತ ಚಾಮರಾಜಪೇಟೆಯಲ್ಲಿ ‘ವಿದೇಶಿ ಅಂಚೆ ಕಚೇರಿ’ ತೆರೆದಿದೆ.
ಇನ್ಮುಂದೆ ಗ್ರಾಹಕರು ಸುಲಭವಾಗಿ ಸರಕುಗಳನ್ನು ವಿದೇಶದಿಂದ ತರಿಸಿಕೊಳ್ಳಬಹುದು ಮತ್ತು ಇಲ್ಲಿಂದ ವಿದೇಶಕ್ಕೆ ಕಳುಹಿಸಬಹುದಾಗಿದೆ. ಸದ್ಯ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಕೊರಿಯಾ, ಸಿಂಗಾಪೂರ್, ದುಬೈ, ಅಮೆರಿಕಗಳಲ್ಲಿ ಆಪರೇಟ್ ಮಾಡಲಾಗುತ್ತಿದೆ ಎಂದು ಬೆಂಗಳೂರು ವಲಯದ ಜಿಎಸ್ಟಿ ಮತ್ತು ಕೇಂದ್ರ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಡಿ.ಪಿ. ನಾಗೇಂದ್ರಕುಮಾರ್ ತಿಳಿಸಿದ್ದಾರೆ.