ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಹೊಸ ರನ್‌ವೇ ಕಾರ್ಯಾರಂಭಗೊಂಡಿದೆ.
ಈ ಮೂಲಕ ಸಮಾನಾಂತರವಾಗಿ ಎರಡು ರನ್‌ವೇಗಳನ್ನು ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ.
ಹೈದರಾಬಾದ್-ಬೆಂಗಳೂರು ಇಂಡಿಗೋ ಏರ್‌ಲೈನ್ಸ್ ವಿಮಾನ ನೂತನ ದಕ್ಷಿಣ ರನ್ ವೇನಿಂದ ಶುಕ್ರವಾರ ಸಂಜೆ 4.37ಕ್ಕೆ ಟೇಕಾಫ್ ಆಯಿತು.
45 ಮೀಟರ್ ಅಗಲ ಹಾಗೂ 4 ಸಾವಿರ ಮೀಟರ್ ಉದ್ದದ ರನ್‌ವೇ ಹಾಗೂ ಹಾಲಿ ರನ್‌ವೇಗಳಲ್ಲಿ ಏಕಕಾಲದಲ್ಲಿ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಧ್ಯವಾಗಲಿದೆ ಎಂದು ಕೆಐಎ ಸಿಇಒ ಹರಿ ಮರಾರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಹೊಸ ರನ್ ವೇ ಕಾರ್ಯಾರಂಭ
Follow Us