ಬೆಂಗಳೂರು: ಪ್ರತಿಷ್ಟಿತ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 107ನೇ ಮಹಾ ಅಧಿವೇಶನ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 73 ವಿಜ್ಞಾನಿಗಳ ಸಂಶೋಧನಾ ಆವಿಷ್ಕಾರವನ್ನು ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಂತೆ ಸರ್ಕಾರ ಹೊಂದಿರುವ ನಿಲುವನ್ನು ಪ್ರಧಾನಿ ಈ ಕಾರ್ಯಕ್ರಮದಲ್ಲಿ ಪುನರುಚ್ಚರಿಸುವ ಸಾಧ್ಯತೆಗಳಿವೆ