ಮಂಗಳೂರು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೂಚನೆಯಂತೆ ಅಲ್ಲಿನ ತೃಣಮೂಲ ಕಾಂಗ್ರೆಸ್ ನಿಯೋಗ ಇಲ್ಲಿಗೆ ಆಗಮಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಗೋಲಿಬಾರ್‍ಗೆ ಬಲಿಯಾದ ಇಬ್ಬರ ಮನೆಗಳಿಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳ ಪರಿಹಾರ ನೀಡಲಿದೆ.
ನಿಯೋಗದಲ್ಲಿ ಪಶ್ಚಿಮ ಬಂಗಾಳ ಸಚಿವರು, ಶಾಸಕರು ಹಾಗೂ ಕೆಲ ಅಧಿಕಾರಿಗಳಿದ್ದು, ಮಂಗಳೂರಿನ ಈಗಿನ ಸ್ಥಿತಿಗತಿ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ವರದಿ ನೀಡಲಿದೆ.
ಮಂಗಳೂರಿಗೆ ಪಶ್ಚಿಮ ಬಂಗಾಳ ನಿಯೋಗ
Follow Us