ಹಾವೇರಿ: ಉಪಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳುವಾಗ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಹಿರೇಕೆರೂರಿನಲ್ಲಿ ನಡೆದಿದೆ.
ಹಿರೇಕೆರೂರ
ತಾಲ್ಲೂಕಿನ ಆರೆಕಟ್ಟಿ ಗ್ರಾಮದ 70 ವರ್ಷದ ಕಮಲವ್ವ ದೊಡ್ಡನಗೌಡರ ಹೊಟ್ಟೇರ
ಮನೆಯಿಂದ ಮತದಾನ ಮಾಡಲು ಹೊರಟಾಗ ರಸ್ತೆಯಲ್ಲಿ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಂಸಬಾವಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.