ಬೆಂಗಳೂರು: ಇಂದು ಮದುವೆಯಾಗುವುದೂ ಸುಲಭದ ಕೆಲಸವಲ್ಲ. ಮದುವೆಯಾಗಲೇಬೇಕು ಎಂದು ಹಠ ತೊಟ್ಟು ಮೋಸ ಹೋಗುವವರಿಗೇನೂ ಕಮ್ಮಿಯಿಲ್ಲ. ಬೆಂಗಳೂರಿನಲ್ಲೂ ಹೀಗೇ ಆಗಿದೆ. ವರ್ಷ 42 ತುಂಬಿದ್ದರೂ ಮದುವೆಯಾಗಿಲ್ಲ ಎನ್ನುವ ಕೊರಗಿನಲ್ಲಿದ್ದ ಶಿವಮೊಗ್ಗ ಅರ್ಚಕರು ಯುವತಿಯೊಬ್ಬಳನ್ನು ಮದುವೆಯಾಗಿದ್ದಾರೆ. ಮದುವೆ ನಂತರ ಈ ಅರ್ಚಕರು ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಜಿ ಭಟ್ ಎಂಬುವರು ಮೋಸ ಹೋದವರು. ಯಾರೂ ಇವರಿಗೆ ಹೆಣ್ಣು ಕೊಡಲು ಮುಂಡಗದ್ದರಿಂದ ವಯಸ್ಸು 42 ಆದರೂ ಮದುವೆಯಾಗಿರಲಿಲ್ಲ. ಕೊನೆಗೆ, ಗಣೇಶ್ ಬಿ ಎನ್ನುವ ಬ್ರೋಕರ್ ಮದುವೆ ಮಾಡಿಸಲು ಮುಂದೆ ಬಂದಿದ್ದ.
ನಯನ ಕುಮಾರಿ ಎನ್ನುವ ಅನಾಥೆಯನ್ನು ನಾನೇ ಬೆಳೆಸಿದ್ದು, ಆಕೆಗೆ 27 ವರ್ಷ. ನಾನು, ಶ್ರೀಕಾಂತ್ ಐತಾಳ್, ಅಚ್ಯುತ್ ಹೆಬ್ಬಾರ್ ಹೆಸರಿನ ಬ್ರೋಕರ್ ಜತೆಗೂಡಿ ನಿನಗೆ ಮದುವೆ ಮಾಡಿಸುತ್ತೇವೆ. ಇದಕ್ಕಾಗಿ ಮೂರು ಲಕ್ಷ ರೂಪಾಯಿ ನೀಡಬೇಕು ಎಂದು ಬ್ರೋಕರ್ ಗಣೇಶ್ ಹೇಳಿದ್ದರು.
ಕುಂದಾಪುರದ ದೇವಾಲಯದಲ್ಲಿ ಜಿ ಭಟ್ ನಯನಾಳನ್ನು ವಿವಾಹವಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿಗೆ ಆಗಮಿಸಿದ್ದರು. ಮದುವೆಯಾದ ಒಂದು ತಿಂಗಳಲ್ಲಿ ನಯನಾ ಭಾರೀ ಬದಲಾಗಿದ್ದಳು. ‘ನನಗೆ ಕಿರಿಕಿರಿ ಉಂಟಾಗುತ್ತಿದೆ. ಒಂದಷ್ಟು ದಿನ ಏಕಾಂತ ಬೇಕೆಂದು ಆಕೆ ಮನೆ ಬಿಟ್ಟು ತೆರಳಿದ್ದಳು. ಈ ವೇಳೆ ನಯನಾ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಳು.
ಕೇಸ್ ಗೆ ಸಂಬಂಧಿಸಿ ಜಿ ಭಟ್ ದೂರು ನೀಡಿದ್ದು, ಶ್ರೀಕಾಂತ್ ಐತಾಳ್ನನ್ನು ಬಂಧಿಸಲಾಗಿದೆ. ಈ ವೇಳೆ ನಯನಾಗೆ ಈ ಮೊದಲು ಎರಡು ಬಾರಿ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.
ಮದುವೆಯಾಗಿ 11 ಲಕ್ಷ ರೂ. ಕಳೆದುಕೊಂಡ ಅರ್ಚಕ!
Follow Us