ಹಾಸನ: ಪೊಲೀಸರೇ ಮದ್ಯಪಾನ ಮಾಡಲು ಪ್ರೋತ್ಸಾಹಿಸುತ್ತಿರುವ ಬರಹವುಳ್ಳ ಬ್ಯಾರಿಕೇಡ್ ಫೋಟೋವೊಂದು ವೈರಲ್ ಆಗಿದೆ.
ಪೇಂಟರ್ ಮಾಡಿದ ತಪ್ಪಿನಿಂದ ಹಾಸನ ಪೊಲೀಸರು ಮುಜುಗರಕ್ಕೊಳಗಾಗಿದ್ದಾರೆ. ಹಾಸನದ ಪ್ರವಾಸಿ ಮಂದಿರದ ಎದುರು ಇರಿಸಿರುವ ಬ್ಯಾರಿಕೇಡ್ ನ ಒಂದು ಬದಿಯಲ್ಲಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂತಲೂ, ಇನ್ನೊಂದು ಬದಿ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಬರೆಯಲು ಅಧಿಕಾರಿಗಳು ಸೂಚಿಸಿದ್ದರು. ಆದರೆ ಪೇಟಂರ್ ‘ಮದ್ಯಪಾನ ಮಾಡಿ ಜೀವ ಉಳಿಸಿ’ ಎಂದು ಬರೆದಿದ್ದ. ತಕ್ಷಣ ಎಚ್ಚೆತ್ತ ಪೊಲೀಸರು ಬ್ಯಾರಿಕೇಡ್ ಬದಲಿಸಿದರೂ ಪೊಲೀಸರು ಟ್ರೋಲ್ ಗೊಳಗಾಗುವುದು ನಿಂತಿಲ್ಲ.
ಮದ್ಯಪಾನ ಮಾಡಿ ಎಂದ ಹಾಸನ ಪೊಲೀಸರು!
Follow Us