ಬೆಳಗಾವಿ: ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ವಾಣಿಜ್ಯ ಕಟ್ಟಡಕ್ಕೆ ಮನೆಹಾನಿ ಎಂದು ತಪ್ಪು ವರದಿ ನೀಡಿದ ಆರೋಪದ ಮೇಲೆ ಕಂದಾಯ, ಲೋಕೋಪಯೋಗಿ ಮತ್ತು ಮಹಾನಗರ ಪಾಲಿಕೆಯ ನಾಲ್ವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಅನಗೋಳದ ಗ್ರಾಮ ಲೆಕ್ಕಿಗ ಎಸ್.ಜಿ.ಜೋಗಳೇಕರ, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕ ಸಿ.ಐ.ಬಿ.ಪಾಟೀಲ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಸಿ.ಮಠಪತಿ ಇವರನ್ನು ಜಿಲ್ಲಾಧಿಕಾರಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ.
ಮನೆಹಾನಿ ಕುರಿತು ತಪ್ಪು ಮಾಹಿತಿ ನೀಡಿದ ನಾಲ್ವರ ಅಮಾನತು
Follow Us