ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ದೇವಾಲಯದ ಹುಂಡಿಯಲ್ಲಿ ಈ ಬಾರಿ ದಾಖಲೆಯ ಮೊತ್ತ ಸಂಗ್ರಹವಾಗಿದ್ದು, ಕೋಟ್ಯಧೀಶ ಸ್ಥಾನ ಉಳಿಸಿಕೊಂಡಿದೆ.
ಮಂಗಳವಾರ ತಡರಾತ್ರಿಯವರೆಗೂ ಹುಂಡಿ ಕಾಣಿಕೆಯ ಎಣಿಕೆ ಕಾರ್ಯ ನಡೆಯಿತು. ಈ ವೇಳೆ 1,71,00,458 ರೂ. ಕಾಣಿಕೆ ಸಂಗ್ರಹವಾಗುವುದರ ಮೂಲಕ ಕಳೆದ ವರ್ಷದಂತೆ ಈ ವರ್ಷವೂ ಮಲೆ ಮಹದೇಶ್ವರ ಕೋಟ್ಯಧೀಶನಾಗಿದ್ದಾನೆ.
ನಗದು ಜತೆಗೆ 22 ಗ್ರಾಂ ಚಿನ್ನ, 1.40 ಕೆ.ಜಿ. ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದಾರೆ. ಅಲ್ಲದೇ ಕಳೆದ ಬಾರಿ 1.39 ಕೋಟಿ ರೂ ಕಾಣಿಕೆ ಸಂಗ್ರಹವಾಗಿತ್ತು.