ಮೈಸೂರು: ಪ್ರವಾಸೋದ್ಯಮ ಇಲಾಖೆಯ ಐಷಾರಾಮಿ, ಸುವರ್ಣರಥ, ಗಾಲಿಗಳ ಮೇಲೆ ಅರಮನೆ ವಿಲಾಸಿ ರೈಲು ಸಂಚಾರ ಮತ್ತೆ ಮುಂದಿನ ವರ್ಷದ ಮಾರ್ಚ್ ನಿಂದ ಪುನರಾರಂಭಗೊಳ್ಳಲಿದೆ.
ಈ ಐಷಾರಾಮಿ ರೈಲು ಕರ್ನಾಟಕ, ಗೋವಾದ ಸುಂದರ ತಾಣಗಳನ್ನು ಪ್ರವಾಸಿಗರಿಗೆ ಉಣಬಡಿಸಲಿದೆ. ರೈಲಿನ ಪ್ರವಾಸದ ಅವಧಿ 8 ದಿನ ಮತ್ತು 7 ರಾತ್ರಿಗಳನ್ನು ಒಳಗೊಂಡಿದ್ದು, ಬೇಲೂರು, ಹಳೇಬೀಡು, ಹಂಪಿ, ಬದಾಮಿ, ಪಟ್ಟದಕಲ್ಲು, ಐಹೊಳೆ ದರ್ಶನದ ಮೂಲಕ ರೈಲು ಗೋವಾಕ್ಕೆ ತೆರಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ನಿಂದ ಸುವರ್ಣ ರಥ ರೈಲು ಸಂಚಾರ ಆರಂಭ
Follow Us