ಬೆಂಗಳೂರು: ಪ್ರಸಕ್ತ ಸಾಲಿನ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ಮತ್ತು ಈ ಹೊತ್ತಿಗೆ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ಈ ಬಾರಿ ಕೊಡಗಿನ ಮುಸ್ತಫಾ ಕೆ.ಎಚ್. ಅವರ ‘ಹರಾಂನ ಕಥೆಗಳು’ ಕಥಾಸಂಕಲನಕ್ಕೆ ಲಭಿಸಿದೆ.
ಈ ಹೊತ್ತಿಗೆ ಕಥಾ ಸ್ಪರ್ಧೆ ವಿಭಾಗದಲ್ಲಿ ತುಮಕೂರಿನ ಗೋವಿಂದರಾಜು ಎಂ. ಕಲ್ಲೂರು ಅವರ ‘ಒಂಟಿ ನಕ್ಷತ್ರ ಗುಳೇ ಹೋದ ದಿವಸ’ ಕಥೆಗೆ ಮೊದಲ ಬಹುಮಾನ, ಕಲಬುರಗಿಯ ಕಪಿಲ ಪಿ. ಹುಮನಾಬಾದೆ ಅವರ ‘ಬಿಸಿಲು’ ಕಥೆಗೆ ದ್ವಿತೀಯ, ಬೆಂಗಳೂರಿನ ದಾದಾಪೀರ್ ಜೈಮನ್ ಅವರ ‘ಎಲ್ಲೋ ಯಲ್ಲೋ’ ಕಥೆಗೆ ತೃತೀಯ ಬಹುಮಾನ ಲಭಿಸಿದೆ ಎಂದು ಲೇಖಕಿ, ‘ಈ ಹೊತ್ತಿಗೆ’ ಸಂಸ್ಥೆಯ ಸಂಸ್ಥಾಪಕಿ ಜಯಲಕ್ಷ್ಮಿ ಪಾಟೀಲ್ ತಿಳಿಸಿದ್ದಾರೆ.
ಯರಗುಪ್ಪಿಯ ಬಸನಗೌಡ ಪಾಟೀಲ್ ಅವರ ‘ಮೈಲಿಗೆ ಗುಡಿಸಲು’, ಪುತ್ತೂರಿನ ವಿಶ್ವನಾಥ್ ಎನ್. ಅವರ ‘ಋಣ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಸಿ.ಜಿ. ಮಂಜುಳಾ, ಕೇಶವ ಮಳಗಿ, ಉಷಾ ಪಿ. ರೈ, ಎಸ್.ಎಂ. ಪಾಟೀಲ್ ತೀರ್ಪುಗಾರರಾಗಿದ್ದರು.
ಮುಸ್ತಫಾಗೆ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ
Follow Us