ಹೊನ್ನಾವರ (ಉ.ಕ.): 2019 ರ ಪ್ರತಿಷ್ಠಿತ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಠ್ರೀಯ ಪ್ರಶಸ್ತಿ’ಗೆ ಪ್ರಸಿದ್ಧ ಭರತನಾಟ್ಯ ಕಲಾವಿದೆ, ಸಂಶೋಧಕಿ ಡಾ. ಪದ್ಮಾ ಸುಬ್ರಹ್ಮಣ್ಯ, ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗೆ ಪ್ರಸಿದ್ಧ ಚಂಡೆ ವಾದಕ ಕೃಷ್ಣ ಯಾಜಿ ಇಡಗುಂಜಿ ಆಯ್ಕೆಯಾಗಿದ್ದಾರೆ.
ಫೆ.20ರಿಂದ 24ರವರೆಗೆ ಹೊನ್ನಾವರದ ಗುಣವಂತೆಯಲ್ಲಿ ನಡೆಯುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-11 ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಡಳಿಯ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಯಕ್ಷ ಪ್ರಶಸ್ತಿಗೆ ಪದ್ಮಾ ಸುಬ್ರಹ್ಮಣ್ಯ, ಕೃಷ್ಣ ಯಾಜಿ ಆಯ್ಕೆ
Follow Us