ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ಸಚಿವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇವರಲ್ಲಿ ಈಶ್ವರಪ್ಪ ಕೂಡ ಒಬ್ಬರು. ಇದರಲ್ಲಿ ವಿಶೇಷ ಏನಿದೆ ಅಂತಾ ನೀವು ಕೇಳಬಹುದು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಅತ್ಯುಗ್ರ ಟೀಕಾ ಪ್ರಹಾರ ನಡೆಸಿದವರಲ್ಲಿ ಈಶ್ವರಪ್ಪ ಮೊದಲ ಸ್ಥಾನದಲ್ಲಿ ಇದ್ದಾರೆ. ರಾಣೆ ಬೆನ್ನೂರಿನಲ್ಲಂತೂ ಈಶ್ವರಪ್ಪ ವೇಗದೂತ ಬಸ್ ನಂತೆ ಟೀಕಾ ಪ್ರಹಾರ ನಡೆಸಿದರು. ಇದಕ್ಕೆ ಸಿದ್ದರಾಮಯ್ಯಪ್ರತ್ಯುತ್ತರ ನೀಡಿದ್ದರು. ಈಶ್ವರಪ್ಪನಿಗೆ ಮೆದುಳೇ ಇಲ್ಲ ಎಂದು ಏಕ ವಚನದಲ್ಲಿ ಕುಟುಕಿದ್ದರು. ಆದರೆ ಇದೀಗ ಇದೆಲ್ಲ ಇತಿಹಾಸ. ಇಬ್ಬರ ಮಧ್ಯೆ ಅತ್ಯಂತ ಸೌಹಾರ್ದ ಸಂಬಂಧ ಇದೆ. ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.