ಬೆಂಗಳೂರು: ಬರ ಪರಿಹಾರ ವಿತರಣೆಯಲ್ಲಿ ಕೇಂದ್ರ ರಾಜ್ಯ ಸರ್ಕಾರಕ್ಕೆ ಸ್ಪಂದಿಸುತ್ತಿಲ್ಲ ಎಂಬ ದೂರಿನ ಮಧ್ಯೆಯೇ, ಬಿಜೆಪಿ ರಾಜ್ಯ ಘಟಕ ಕೇಂದ್ರದ ಕೊಡುಗೆ ಬಗ್ಗೆ ಪ್ರಸ್ತಾಪಿಸಿದೆ. ಟ್ವಿಟರ್ ನಲ್ಲಿ 2014ರ ಬಳಿಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೆಲ್ಲ ಕೊಡುಗೆ ನೀಡಿದೆ ಎಂಬುದರ ಸಮಗ್ರ ಪಟ್ಟಿ ನೀಡಿದೆ. ಐಐಟಿ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ, ಜನೌಷಧಿ ಕೇಂದ್ರ ಹೀಗೆ ಹತ್ತು ಹಲವು ಯೋಜನೆಗಳ ಹೆಸರು ಇಲ್ಲಿ ರಾರಾಜಿಸುತ್ತಿವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಟ್ವಿಟರ್ ಮೊರೆ ಹೋಗಿದೆ ಎಂದು ವಿಶ್ಲೇಷಿಸಲಾಗಿದೆ.