Saturday, December 2, 2023

ಶಾಸಕ ಸಿದ್ದು ಸವದಿ ಮನೆಯೆದುರು ಜೈನ ಮುನಿ ಪ್ರತಿಭಟನೆ 

Follow Us

ಬಾಗಲಕೋಟೆ: ತೇರದಾಳ ಶಾಸಕ ಸಿದ್ದು ಸವದಿ ಅವರ ಬನಹಟ್ಟಿ ನಿವಾಸದ ಎದುರು ಜೈನ ಮುನಿ ಹಳಂಗಳಿಯ ಭದ್ರಗಿರಿ ಬೆಟ್ಟದ ಕುಲರತ್ನ ಭೂಷಣ ಮಹಾರಾಜರು ಶನಿವಾರ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ಬೇಡಿಕೆ ಈಡೇರುವರೆಗೂ ಶಾಸಕರ ಮನೆ ಮುಂದೆ ಆಮರಣ ಉಪವಾಸ ಮಾಡಲು ಶ್ರೀಗಳು ನಿರ್ಧರಿಸಿದ್ದಾರೆ.  ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹಳಂಗಳಿಯ ಭದ್ರಗಿರಿ ಬೆಟ್ಟದಲ್ಲಿನ ಕಂದಾಯ ಇಲಾಖೆ ಭೂಮಿಯ 83.30 ಎಕರೆ ಜಾಗದಲ್ಲಿ ಪುನರ್ ವಸತಿ ಕೇಂದ್ರ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಮುನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ಲಕ್ಷಾಂತರ ಗಿಡಗಳನ್ನು ನೆಡಲಾಗಿದೆ. ಈ ಜಾಗದಲ್ಲಿ ಜೈನರ 603 ಗುಂಪಾಗಳು ಇವೆ. ಈ ಜಾಗವನ್ನು ಭದ್ರಗಿರಿ ಬೆಟ್ಟಕ್ಕೆ ಕೊಡಬೇಕು. 83.30 ಎಕರೆ ಜಾಗ ಬಿಟ್ಟು ಕಂದಾಯ ಇಲಾಖೆಯ ಇತರೆ ಜಾಗದಲ್ಲಿ ಪುನರ್ ವಸತಿ ಕಲ್ಪಿಸಿ ಎಂದು ಶ್ರೀಗಳು ಆಗ್ರಹಿಸಿದ್ದಾರೆ. ತಹಸೀಲ್ದಾರ ಪ್ರಶಾಂತ ಚನಗೊಂಡ ಹಾಗೂ ಪೊಲೀಸರು‌ ಭೇಟಿ ನೀಡಿದ್ದು, ಶ್ರೀಗಳ ಮನವೊಲಿಕೆಗೆ ಯತ್ನಿಸಿದರೂ ಶ್ರೀಗಳು ಒಪ್ಪಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!