ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಾಜಿಗೆ ಹೋಲಿಸುವ ಹೊಸ ಪುಸ್ತಕದ ಪ್ರಕಟಣೆಯಲ್ಲಿ ತಮ್ಮ ಕೈವಾಡವನ್ನು ಬಿಜೆಪಿ ಅಲ್ಲಗೆಳೆದಿದೆ.
ಬಿಜೆಪಿಯ ಸಹ ಮಾಧ್ಯಮ ಉಸ್ತುವಾರಿ ಸಂಜಯ್ ಮಾಯುಕ್ತ್, ಈ ಪುಸ್ತಕ ಹಾಗೂ ಅದರಲ್ಲಿರುವ ಅಂಶಗಳೊಂದಿಗೆ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜೆಪಿ ನಾಯಕ ಜೈ ಭಗವಾನ್ ಗೋಯಲ್ ಅವರು ಬರೆದಿರುವ ಪುಸ್ತಕದಲ್ಲಿ ಪ್ರಧಾನಿ ಮೋದಿಯನ್ನು ಶಿವಾಜಿಗೆ ಹೋಲಿಸಬಹುದು ಎಂಬ ಉಲ್ಲೇಖವಿರುವುದು ವಿವಾದಕ್ಕೆ ಕಾರಣವಾಗಿದೆ.