ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾವಿರಾರು ಜನರು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ಪಾರ್ಥೀವ ಶರೀರದ ದುಃಖಭರತಿ ಅಂತ್ಯದರ್ಶನ ಪಡೆದರು.
ಬೆಂಗಳೂರಿಗೆ ಆಗಮಿಸಿದ ಶ್ರೀಗಳ ಪಾರ್ಥೀವ ಶರೀರವನ್ನು ವಿಮಾನ ನಿಲ್ದಾಣದಿಂದ ಪಾರ್ಥೀವ ಶರೀರವನ್ನು ಶೂನ್ಯ ಟ್ರಾಫಿಕ್ ರಸ್ತೆಯಲ್ಲಿ ತೆರೆದ ಜೀಪ್ ನಲ್ಲಿ ಕರೆತರಲಾಯಿತು. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಹೂಗುಚ್ಛ ಇರಿಸಿ ಅಂತಿಮ ನಮವ ಸಲ್ಲಿಸಿದರು.
ಪಾರ್ಥೀವ ಶರೀರವನ್ನು ಧಾರ್ಮಿಕ ವಿಧಿವಿಧಾನಕ್ಕಾಗಿ ಮಠಕ್ಕೆ ಒಪ್ಪಿಸುವ ಮುನ್ನ, 21 ಸುತ್ತಿನ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.