ಬೆಂಗಳೂರು: ಸಚಿವ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡುವಂತೆ ಆಗ್ರಹಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ಶ್ರೀರಾಮುಲು ಅಭಿಮಾನಿಗಳು ಇದಕ್ಕೆ ಸಾಥ್ ನೀಡಿದ್ದಾರೆ. ಆದರೆ ಈ ಬೇಡಿಕೆ ಕುರಿತಂತೆ ಶ್ರೀರಾಮುಲು ಕೂಲ್ ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ. ನಾನು ಎಂದು ಕೂಡ ಉಪ ಮುಖ್ಯಮಂತ್ರಿ ಪಟ್ಟ ಬೇಕೇಂದು ಆಗ್ರಹಪಡಿಸಿರಲಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೊಣೆಗಾರಿಕೆ ನೀಡಿದರೆ ಸಂತೋಷದಿಂದ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.