ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಕುಟುಂಬ ಸದಸ್ಯರ ಜೊತೆ ಸಿಂಗಾಪುರಕ್ಕೆ ತೆರಳಿದ್ದಾರೆ. ಕುಮಾರಸ್ವಾಮಿ ಅವರ ಅಚ್ಚುಮೆಚ್ಚಿನ ನಗರಗಳಲ್ಲಿ ಸಿಂಗಾಪುರ ಕೂಡ ಒಂದು. ಮುಂದಿನ ಮೂರು ನಾಲ್ಕು ದಿನ ಅಲ್ಲೇ ಅವರು ವಾಸ್ತವ್ಯ ಹೂಡಲಿದ್ದಾರೆ. ಹೊಸ ವರ್ಷವನ್ನು ತಮ್ಮ ಕುಟುಂಬ ಸದಸ್ಯರ ಜೊತೆ ಅಲ್ಲಿ ಸ್ವಾಗತಿಸಲಿದ್ದಾರೆ. ರಾಜಕೀಯ ಬ್ರೇಕ್ ಪಡೆದಿರುವ ಕುಮಾರ ಸ್ವಾಮಿ ಹೊಸ ಉತ್ಸಾಹದೊಂದಿಗೆ ಚಟುವಟಿಕೆಯಲ್ಲಿ ತೊಡಗಲಿದ್ದಾರೆ