ಬೆಂಗಳೂರು: ಹೃದಯ ಸಂಬಂಧಿ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಾಯಕರ ದಂಡೇ ಹರಿದು ಬರುತ್ತಿದೆ. ಪಕ್ಷಾತೀತವಾಗಿ ಎಲ್ಲ ನಾಯಕರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಕ. ಬಿ. ಕೋಳಿವಾಡ, ಸಚಿವ ಸಿ ಟಿ ರವಿ, ಹೆಚ್ ವಿಶ್ವನಾಥ್ ಮತ್ತು ಜಿ ಟಿ ದೇವೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು