ಬೆಂಗಳೂರು: ಗುರುವಾರ ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ ಇದು ಅತ್ಯಂತ ಅಪಾಯಕಾರಿ ಕೇತುಗ್ರಸ್ಥ ಸೂರ್ಯ ಗ್ರಹಣ. ದ್ವಾದಶ ರಾಶಿಗಳ ಮೇಲೆ ಸೂರ್ಯ ಗ್ರಹಣದ ಪರಿಣಾಮ ಬೀಳಲಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ದೇವಾಲಯಗಳು ಬಂದ್ ಆಗಲಿದೆ. ಬೆಂಗಳೂರು ಭಾಗದಲ್ಲಿ ಬೆಳಗ್ಗೆ 8.05 ರಿಂದ 11.04 ರವರೆಗೂ ಗ್ರಹಣ ಸಂಭವಿಸಲಿದೆ.
ದೇಶದ ಇತರೆ ಭಾಗದಲ್ಲಿ ಸೂರ್ಯಗ್ರಹಣದ ಪ್ರಮಾಣವು ಬೇರೆ ಬೇರೆ ರೀತಿಯಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.100ರಷ್ಟು ಸೂರ್ಯಗ್ರಹಣ ಗೋಚರಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಸದ್ಯ ಕುಟ್ಟ ಗ್ರಾಮದತ್ತ ಎಲ್ಲರ ಗಮನವೂ ಕೇಂದ್ರಿಕೃತವಾಗಿದೆ.
ಸೂರ್ಯಗ್ರಹಣ : ಮಡಿಕೇರಿಯ ಕುಟ್ಟ ಗ್ರಾಮದತ್ತ ವಿಜ್ಞಾನಿಗಳ ಚಿತ್ತ
Follow Us