Friday, January 15, 2021

ಸೈಬರ್ ಯುಗದಲ್ಲಿ ಎಚ್ಚರದಲ್ಲಿ ಇರಿ: ಯಾಮಾರಿದರೆ ಹಣ ಮಾಯ

ಬೆಂಗಳೂರು: : ಇದು ಸೈಬರ್ ಯುಗ. ಎಲ್ಲರ ಕೈಯಲ್ಲಿ ಮೊಬೈಲ್. ಜೊತೆಗೆ ಇಂಟರ್ ನೆಟ್ ಸಂಪರ್ಕ. ವ್ಯಾಪಾರ, ವ್ಯವಹಾರ ಮಾತುಕತೆ ಎಲ್ಲವೂ ಆನ್ ಲೈನ್. ಇದೇ ಸೈಬರ್ ಕಳ್ಳರಿಗೆ ಸುವರ್ಣಾವಕಾಶ ನೀಡಿದೆ. ನಿಮ್ಮಗೆ ಗೊತ್ತಿಲ್ಲದೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಇದನ್ನು ತಡೆಗಟ್ಟಬಹುದು. ಮಾಲ್ ಗಳಲ್ಲಿ  ನಿಮ್ಮ ಮೊಬೈಲ್ ನಂಬರನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ. ದೂರವಾಣಿ ಮೂಲಕ ವೈಯಕ್ತಿಕ ಮಾಹಿತಿ ಕರೆಗೆ ಸ್ಪಂದಿಸಬೇಡಿ. ಇದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಿಗೆ ನೀಡಿರುವ ಸೂಚನೆ.  ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್  ನಂಬರ್ ಯಾರೊಂದಿಗೂ ಶೇರ್ ಮಾಡಬೇಡಿ ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.  ಕಳ್ಳರ ಟಾರ್ಗೆಟ್ ಇದೇ ಮೊಬೈಲ್ ನಂಬರ್ ಆಗಿದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಅಮೆರಿಕದಲ್ಲಿ ಪತ್ನಿ, ಮಗಳನ್ನು ಕೊಂದು ಗುಂಡಿಕ್ಕಿಕೊಂಡ ಭಾರತ ಮೂಲದ ವ್ಯಕ್ತಿ

newsics.com ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ಗುಂಡು ಹಾರಿಸಿಕೊಂಡು...

ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಈ...

ಹಿರಿಯ ಪತ್ರಕರ್ತ ಹನುಮಂತ ಹೂಗಾರ ನಿಧನ

newsics.com ಹುಬ್ಬಳ್ಳಿ: 2020ನೇ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು. ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ ನೇತಾಜಿ, ವಿಶಾಲ ಕರ್ನಾಟಕ, ಪ್ರವರ್ತಕ, ಕುಟುಂಬ...
- Advertisement -
error: Content is protected !!