ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಸ್ಥಳೀಯ ನಗರಾಡಳಿತ ಸಂಸ್ಥೆಗಳಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಆಯ್ಕೆ ಆದವರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್ ಕರ್ನಾಟಕದ 8 ಹುದ್ದೆಗಳು ಸೇರಿ ಒಟ್ಟು 101 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಶಿಕ್ಷಕರ ಹುದ್ದೆಗೆ ಆಯ್ಕೆಯಾದ 123 ಅಭ್ಯರ್ಥಿಗಳ ಪಟ್ಟಿ, ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ 42 ಸಹಾಯಕ ಲೆಕ್ಕಪತ್ರ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಕೂಡ ಪ್ರಕಟವಾಗಿದೆ. ಜತೆಗೆ, ಕೃಷಿ ಮಾರುಕಟ್ಟೆ ಇಲಾಖೆಯ ಮಾರುಕಟ್ಟೆ ಸಹಾಯಕ ಹುದ್ದೆಗೆ 25 ಅಭ್ಯರ್ಥಿಗಳನ್ನು, ಅಲ್ಪಸಂಖ್ಯಾತ ಇಲಾಖೆಯ ವಸತಿಯ ಶಾಲೆಯ ಹೆಚ್ಚುವರಿ ವಾರ್ಡನ್ ಹುದ್ದೆಗಳಿಗೆ 8 ಜನರನ್ನು ಆಯ್ಕೆ ಮಾಡಲಾಗಿದೆ.
http://kpsc.kar.nic.in/ ನಲ್ಲಿ ಈ ಕುರಿತು ಮಾಹಿತಿ ಪಡೆಯಬಹುದು.