ಬೆಂಗಳೂರು: ಉಪ ಚುನಾವಣೆಯಲ್ಲಿ ಗೆದ್ದ 10 ಶಾಸಕರು ಬಿಎಸ್ ವೈ ನೇತೃತ್ವದ ಸಂಪುಟ ಸೇರಲಿದ್ದಾರೆ.
ಗುರುವಾರ ಬೆಳಗ್ಗೆ 10:30 ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ನೂತನ 10 ಸಚಿವರ ಪ್ರಮಾಣವಚನ ಪಟ್ಟಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ರಾಜಭವನಕ್ಕೆ ಕಳುಹಿಸಿದ್ದಾರೆ.
ಸಿಎಂ ಬಿಎಸ್ ವೈ ರಾಜಭವನಕ್ಕೆ ಕಳುಹಿಸಿರುವ ಪಟ್ಟಿಯ ಪ್ರಕಾರ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್,
ಗೋಪಾಲಯ್ಯ, ಶಿವರಾಂ ಹೆಬ್ಬಾರ್, ರಮೇಶ್ ಜಾರಕಿಹೊಳಿ, ಡಾ.ಸುಧಾಕರ್, ನಾರಾಯಣಗೌಡ, ಆನಂದ್ ಸಿಂಗ್, ಶ್ರೀಮಂತ ಪಾಟೀಲ್, ಬಿ ಸಿ ಪಾಟೀಲ್ ಸಂಪುಟ ಸೇರಲಿದ್ದಾರೆ.
ಬಿಎಸ್ ವೈ ಸಂಪುಟಕ್ಕೆ ಇಂದು 10 ಹೊಸ ಸಚಿವರ ಸೇರ್ಪಡೆ
Follow Us