newsics.com
ಬೆಂಗಳೂರು: ಮುಂದಿನ ಮಾರ್ಚ್ ಬಳಿಕ ರಾಜ್ಯದಲ್ಲಿ ಒಂದು ಸಾವಿರ ಜನೌಷಧ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಡಿ ಪ್ರಧಾನಮಂತ್ರಿ ಜನೌಷಧ ಕೇಂದ್ರದ ವರ್ಚುವಲ್ ಉದ್ಘಾಟನೆ(ಹುಬ್ಬಳ್ಳಿಯಲ್ಲಿ ಪ್ರಾಂತೀಯ ಕಚೇರಿ) ನೆರವೇರಿಸಿ ಅವರು ಮಾತನಾಡಿದರು.
ಸಾಧ್ಯವಿರುವ ಸಹಕಾರ ಸಂಘಗಳಲ್ಲಿ ಜನೌಷಧ ಔಟ್ಲೆಟ್(ಮಳಿಗೆ) ಸ್ಥಾಪಿಸಲು ಸಲಹೆ ಮಾಡಿದರು. ದೇಶದಲ್ಲಿ 6,635 ಜನೌಷಧ ಮಳಿಗೆಗಳಿವೆ. ರಾಜ್ಯದಲ್ಲಿ ಪ್ರಸ್ತುತ 715 ಮಳಿಗೆಗಳಿದ್ದು, ಇಂದು(ನ.6) ಮತ್ತೊಂದು ಮಳಿಗೆ ಉದ್ಘಾಟನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಜನೌಷಧ ಮಳಿಗೆ ತೆರೆಯಲು 300 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಬ್ರಾಂಡೆಡ್ ಔಷಧಗಳಂತೆಯೇ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನೌಷಧ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಶೇ.10ರಿಂದ 90ರಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ ಎಂದು ಸದಾನಂದಗೌಡ ಹೇಳಿದರು.
RCBಗೆ ಸಿಗಲಿಲ್ಲ ಜಯ, ಹೈದರಾಬಾದ್’ಗೆ 6 ವಿಕೆಟ್ ಗೆಲುವು
ಸಂಪೂರ್ಣ ನಿಷೇಧ ಹಿಂಪಡೆದ ಸರ್ಕಾರ; ಹಸಿರು ಪಟಾಕಿ ಸಿಡಿಸಲು ಸಮ್ಮತಿ
ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ; ಪೊಲೀಸ್ ವಶಕ್ಕೆ ಸ್ಯಾಕ್ಸೋಫೋನ್ ಗುರು