ಮೈಸೂರು: ಇಲ್ಲಿನ ಜೆ.ಕೆ.ಟೈಯರ್ಸ್ ಕಾರ್ಖಾನೆಯ 107 ನೌಕರರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆಯನ್ನು ಮೀರಿಸಿದೆ. ಜತೆಗೆ ಸಾಕಷ್ಟು ಆತಂಕವನ್ನೂ ಸೃಷ್ಟಿಸಿದೆ.
ಕೆಲ ದಿನಗಳ ಹಿಂದೆ 40ಕ್ಕೂ ಹೆಚ್ಚು ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದರೂ ವಿಚಾರ ಮುಚ್ಚಿಟ್ಟಿದ್ದರು. ಜತೆಗೆ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಖಾನೆಯನ್ನು ಸೀಲ್ಡೌನ್ ಮಾಡಿರಲಿಲ್ಲ. ಆದರೆ ಮಂಗಳವಾರ ಮತ್ತೆ 60ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ ಎಂದು ಕಾರ್ಖಾನೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಸಾಮೂಹಿಕ ಕೋವಿಡ್ ಪರೀಕ್ಷೆ ಸಂದರ್ಭದಲ್ಲಿ 107 ಮಂದಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಜೆ.ಕೆ.ಟೈರ್ಸ್ನ ಇತರೆ ಮೂರು ಘಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಿದೆ.
ಮೈಸೂರಿನ ಜೆ.ಕೆ. ಟೈಯರ್ಸ್ ಕಾರ್ಖಾನೆಯ 107 ನೌಕರರಿಗೆ ಕೊರೋನಾ
Follow Us