ಹಾವೇರಿ: 11 ಮಕ್ಕಳನ್ನು ಹೆತ್ತು ಬೆಳೆಸಿದ ಹಿರಿಯ ಜೀವ ಇದೀಗ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಹ ಸ್ಥಿತಿ ಬಂದಿದೆ.
ಪುಟ್ಟವ್ವ ಕೊಟ್ಟೂರ ಅವರು ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ರಂಗನಾಥನಗರದ ನಿವಾಸಿ. ಪುಟ್ಟವ್ವಳಿಗೆ 7 ಪುತ್ರರು ಹಾಗೂ 4 ಹೆಣ್ಣು ಮಕ್ಕಳಿದ್ದಾರೆ ಮೊಮ್ಮಕ್ಕಳು ಇದ್ದಾರೆ. ತುಂಬು ಸಂಸಾರ ಅವರದ್ದು.
ಇದೀಗ ಅವರಿಗೆ 75 ವಯಸ್ಸು. ಮಕ್ಕಳು, ಮೊಮ್ಮಕ್ಕಳು ಇದ್ದರೂ ಇಳಿ ವಯಸ್ಸಿನಲ್ಲಿ ಅವರನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಸಾಕಷ್ಟು ಆಸ್ತಿ ಇದ್ದರೂ ತುತ್ತು ಊಟಕ್ಕಾಗಿ ಪರದಾಡುತ್ತಿದ್ದಾರೆ
ಇದೀಗ 11 ಮಕ್ಕಳ ತಾಯಿ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ರಾಣೆಬೆನ್ನೂರು ನಗರದಲ್ಲಿ 7 ಮನೆಗಳು, ಸೈಟು ಮತ್ತು ಜಮೀನು ಹೊಂದಿರುವ ಈ ಕುಟುಂಬದ ಹಿರಿಯ ಸದಸ್ಯೆ ಇದೀಗ ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.