ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ 13 ಸದಸ್ಯರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ಬಿಜೆಪಿಯ 12 ಹಾಗೂ ಹೊಸಕೋಟೆಯ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನಿಂದ ಆಯ್ಕೆಯಾದವರು ಪ್ರತ್ಯೇಕವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಸದಸ್ಯರಾದ ಮಹೇಶ್ ಈರನಗೌಡ ಕುಮಟಳ್ಳಿ, ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್, ರಮೇಶ್ ಲಕ್ಷ್ಮಣ ರಾವ್ ಜಾರಕಿಹೊಳಿ, ಅರಬೈಲ್ ಹೆಬ್ಬಾರ್ ಶಿವರಾಮ್, ಬಿ ಸಿ ಪಾಟೀಲ್, ಅರುಣ್ ಕುಮಾರ್ ಗುತ್ತೂರು, ಆನಂದ್ ಸಿಂಗ್, ಡಾ ಕೆ. ಸುಧಾಕರ್, ಬಿ ಎ ಬಸವರಾಜ, ಎಸ್ ಟಿ ಸೋಮಶೇಖರ್, ಕೆ ಗೋಪಾಲಯ್ಯ, ಎಂ ಸಿ ನಾರಾಯಣಗೌಡ ಹಾಗೂ ಶರತ್ ಕುಮಾರ್ ಬಚ್ಚೇಗೌಡ ಶಾಸಕರಾಗಿ ಪದಗ್ರಹಣ ಮಾಡಿದರು.