ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಉಪ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ. ಸಂಜೆ ಆರರವರೆಗೆ ಮತದಾನ ನಡೆಯಲಿದೆ.ರಾಜ್ಯ ಬಿಜೆಪಿ ಸರ್ಕಾರದ ಅಸ್ತಿತ್ವ ಹಾಗೂ 15 ಅನರ್ಹ ಶಾಸಕರ ರಾಜಕೀಯ ಭವಿಷ್ಯ ಬರೆಯಲಿರುವ ಉಪ ಚುನಾವಣೆಯಲ್ಲಿ, 37.82 ಲಕ್ಷ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಪ್ರತಿಷ್ಠೆಯಾಗಿರುವ ಉಪ ಚುನಾವಣೆಯಲ್ಲಿ 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಮತದಾನಕ್ಕೆ ಚುನಾವಣಾ ಆಯೋಗದ ಗುರುತಿನ ಚೀಟಿ ಇಲ್ಲದವರು ಪಾಸ್ಪೋರ್ಟ್, ಡಿಎಲ್, ಕೇಂದ್ರ, ರಾಜ್ಯ, ಸಾರ್ವಜನಿಕ ಸಂಸ್ಥೆಗಳ ಫೋಟೋವುಳ್ಳ ಸೇವಾ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿ ಪಾಸ್ಬುಕ್, ಪಾನ್ ಕಾರ್ಡ್, ಎನ್ಪಿಆರ್ ಸ್ಮಾರ್ಟ್, ನರೇಗಾ, ಹೆಲ್ತ್ ಕಾರ್ಡ್, ಫೋಟೋವುಳ್ಳ ಪಿಂಚಣಿ ದಾಖಲೆ ಬಳಸಿ ಮತ ಚಲಾಯಿಸಬಹುದುಎಲ್ಲೆಲ್ಲಿ ಚುನಾವಣೆ: ಬೆಂಗಳೂರಿನ ಕೆ.ಆರ್.ಪುರ, ಯಶ ವಂತಪುರ, ಮಹಾಲಕ್ಷ್ಮಿಲೇಔಟ್, ಶಿವಾಜಿನಗರ, ಬೆಳಗಾವಿಯ ಅಥಣಿ, ಕಾಗವಾಡ, ಗೋಕಾಕ, ಉತ್ತರಕನ್ನಡದ ಯಲ್ಲಾಪುರ, ಹಾವೇರಿಯ ಹಿರೇಕೆರೂರು, ರಾಣೆಬೆನ್ನೂರು, ಬಳ್ಳಾರಿಯ ವಿಜಯನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಕೆಯ ಹೊಸಕೋಟೆ, ಮಂಡ್ಯದ ಕೃಷ್ಣರಾಜಪೇಟೆ, ಮೈಸೂರಿನ ಹುಣಸೂರು ವಿಧಾನಸಬಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.ಒಟ್ಟು 4185- ಮತಗಟ್ಟೆ ಸ್ಥಾಪಿಸಲಾಗಿದ್ದು, 884- ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. 259- ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.ಡಿ.9ರಂದು ಮತ ಎಣಿಕೆ ನಡೆಯಲಿದೆ.