Thursday, June 1, 2023

ಬೆಂಗಳೂರಿನಲ್ಲಿ 1665, ರಾಜ್ಯದಲ್ಲಿ 2584 ಮಂದಿಗೆ ಕೊರೋನಾ, 23 ಬಲಿ

Follow Us

newsics.com
ಬೆಂಗಳೂರು: ರಾಜ್ಯದಲ್ಲಿ ಇಂದು(ನ.11) 2,584 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 8.53 ಲಕ್ಷಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 23 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,453ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1,665 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,53,146ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 8 ಮಂದಿ ಸಾವನ್ನಪ್ಪಿದ್ದಾರೆ.
ಇಂದು 2,881 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 8,11,581ಕ್ಕೆ ಏರಿಕೆಯಾಗಿದೆ. 30,743 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆಯಲ್ಲಿ 14, ಬಳ್ಳಾರಿಯಲ್ಲಿ 41, ಬೆಳಗಾವಿಯಲ್ಲಿ 28, ಬೆಂಗಳೂರು ಗ್ರಾಮಾಂತರದಲ್ಲಿ 48, ಬೀದರ್ ನಲ್ಲಿ 6, ಚಾಮರಾಜನಗರದಲ್ಲಿ 13, ಚಿಕ್ಕಬಳ್ಳಾಪುರದಲ್ಲಿ 15, ಚಿಕ್ಕಮಗಳೂರಿನಲ್ಲಿ 55, ಚಿತ್ರದುರ್ಗದಲ್ಲಿ 55, ದಕ್ಷಿಣ ಕನ್ನಡದಲ್ಲಿ 63, ದಾವಣಗೆರೆಯಲ್ಲಿ 29, ಧಾರವಾಡದಲ್ಲಿ 22, ಗದಗದಲ್ಲಿ 11, ಹಾಸನದಲ್ಲಿ 59, ಹಾವೇರಿಯಲ್ಲಿ 21, ಕಲಬುರಗಿಯಲ್ಲಿ 32, ಕೊಡಗಿನಲ್ಲಿ 20, ಕೋಲಾರದಲ್ಲಿ 16, ಕೊಪ್ಪಳದಲ್ಲಿ 5, ಮಂಡ್ಯದಲ್ಲಿ 57, ಮೈಸೂರಿನಲ್ಲಿ 112, ರಾಯಚೂರಿನಲ್ಲಿ 15, ರಾಮನಗರದಲ್ಲಿ 11, ಶಿವಮೊಗ್ಗದಲ್ಲಿ 25, ತುಮಕೂರಿನಲ್ಲಿ 59, ಉಡುಪಿಯಲ್ಲಿ 19, ಉತ್ತರ ಕನ್ನಡದಲ್ಲಿ 21, ವಿಜಯಪುರದಲ್ಲಿ 33, ಯಾದಗಿರಿಯಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ.

ಸ್ಪುಟ್ನಿಕ್ -ವಿ ಲಸಿಕೆ ಶೇ.92ರಷ್ಟು ಯಶಸ್ವಿ- ರಷ್ಯಾ ಸಂಸ್ಥೆ

ಪುಲ್ವಾಮಾ ಅಷ್ಟೇ ಅಲ್ಲ, ಮುಂಬೈ ಸ್ಪೋಟದಲ್ಲೂ ನಮ್ಮದೇ ಪಾತ್ರ ಎಂದ ಪಾಕ್

ಮರ ಬಿದ್ದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಾವು

ಮತ್ತಷ್ಟು ಸುದ್ದಿಗಳು

vertical

Latest News

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು...

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು...

ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ

newsics.com ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಲಖನ್‌ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು...
- Advertisement -
error: Content is protected !!