ಬೆಂಗಳೂರು: ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿ ಎರಡು ಕಟ್ಟಡಗಳು ಕುಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮಂಗಳವಾರ ರಾತ್ರಿಯ ವೇಳೆಗೆ ಬಿರುಕು ಬಿಟ್ಟಿದ್ದ 2 ಅಂತಸ್ತಿನ ಕಟ್ಟಡ ಉರುಳಿದೆ.
ಮುಂಜಾಗ್ರತಾ ಕ್ರಮವಾಗಿ ಉಪ್ಪಾರಪೇಟೆ ಪೊಲೀಸರು ಈ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ 50 ಅಡಿ ಆಳದಲ್ಲಿ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಇದಕ್ಕಾಗಿ ಅವೈಜ್ಞಾನಿಕವಾಗಿ ಭೂಮಿಯನ್ನು ಅಗೆಯಲಾಗಿತ್ತು. ಇದರ ಪರಿಣಾಮ ಅಕ್ಕಪಕ್ಕದ ಕಟ್ಟಡಗಳು ಬಿರುಕುಬಿಟ್ಟಿದ್ದವು. ಈ ಕಾರಣಕ್ಕಾಗಿ ಈ ಕಟ್ಟಡದಲ್ಲಿದ್ದ ಜನರನ್ನು ಸೋಮವಾರ ರಾತ್ರಿಯೇ ತೆರವುಗೊಳಿಸಲಾಗಿತ್ತು.
ನಗರದ ಕಪಾಲಿ ಚಿತ್ರಮಂದಿರ ಬಳಿಯಿದ್ದ ಈ ಕಟ್ಟಡಗಳ ಬಳಿ ನಿರ್ಮಾಣವಾಗುತ್ತಿದ್ದ ಮಲ್ಟಿಪ್ಲೆಕ್ಸ್ ಗಾಗಿ ಪಾರ್ಕಿಂಗ್’ಗೋಸ್ಕರ ಅವೈಜ್ಞಾನಿಕವಾಗಿ 50 ಅಡಿ ಆಳ ಭೂಮಿಯನ್ನು ಅಗೆಯಲಾಗಿತ್ತು. ಇಲ್ಲಿ ಮಳೆ ನೀರು ನಿಂತು ಹೀಗಾಗಿ ಎರಡು ಕಟ್ಟಡಗಳು ಕುಸಿದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್’ನಲ್ಲಿ 2 ಕಟ್ಟಡ ಕುಸಿತ
Follow Us