Thursday, June 17, 2021

ಮಂಗಳೂರು ಬಳಿ 2 ಟಗ್ ಬೋಟ್ ನಾಪತ್ತೆ: ಓರ್ವ ಸಾವು, 14 ಮಂದಿಗಾಗಿ ಶೋಧ

newsics.com

ಮಂಗಳೂರು(ದಕ್ಷಿಣ ಕನ್ನಡ): ಎಂಆರ್ಪಿಎಲ್(MRPL)ಗೆ ಸೇರಿದ ಎರಡು ಟಗ್ ಬೋಟ್’ಗಳು ನಾಪತ್ತೆಯಾಗಿದ್ದು, ಈ‌ ಬೋಟ್’ಗಳಲ್ಲಿ 17 ಮಂದಿ ಇದ್ದರು.

ಎರಡು ಟಗ್ ಬೋಟ್’ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು. ಆ ಪೈಕಿ 8 ಮಂದಿ ಇದ್ದ ಟಗ್ ಬೋಟ್ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ ಎಂಟು ಜನರ ಪೈಕಿ ಇಬ್ಬರು ಈಜಿ ದಡ ಸೇರಿದ್ದು, ಒಬ್ಬರ ಶವ ಪತ್ತೆಯಾಗಿದೆ. ಉಳಿದ ಐವರು ಇನ್ನೂ ಸಿಕ್ಕಿಲ್ಲ.

9 ಮಂದಿ ಇದ್ದ ಇನ್ನೊಂದು ಟಗ್ ಬೋಟ್ ಕುರಿತು ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬೋಟ್ ನಲ್ಲಿದ್ದ 9 ಮಂದಿ, ಇನ್ನೊಂದರಲ್ಲಿದ್ದ 8 ಜನರ ಪೈಕಿ ನಾಪತ್ತೆ ಆಗಿರುವ ಐವರು ಸೇರಿ ಒಟ್ಟು 14 ಮಂದಿ ಗಾಗಿ ಶೋಧ ಮುಂದುವರಿದಿದೆ.

ಎರಡೇ ವಾರದಲ್ಲಿ ಕೊರೋನಾಗೆ ತಂದೆ-ತಾಯಿ ಬಲಿ: ತಬ್ಬಲಿಯಾಯ್ತು ಐದು ದಿನದ ಹಸುಗೂಸು

ಮತ್ತಷ್ಟು ಸುದ್ದಿಗಳು

Latest News

ಅರಾವಳಿ ಪರ್ವತ ಭೂಮಿ ಅತಿಕ್ರಮಣ ತೆರವು: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

newsics.com ನವದೆಹಲಿ: ಅರಾವಳಿ ಪರ್ವತ ವ್ಯಾಪ್ತಿಯ ಭೂ ಪ್ರದೇಶದಲ್ಲಿ ನಿರ್ಮಿಸಲಾಗಿರುವ 10000 ವಸತಿ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಯಾವುದೇ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್ ಏಳರಂದು...

ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ತಡೆ

newsics.com ಬೆಂಗಳೂರು: ರಾಜ್ಯ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ 2020-21 ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಸರ್ಕಾರ ಹೇಳಿದ್ದು, ಈ...

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ ಯೋಗೇಶ್ವರ್

newsics.com ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಕೂಡ ರಾಜ್ಯ ಬಿಜೆಪಿ ನಾಯಕರ ಜತೆ ಸಮಾಲೋಚನೆ ಮುಂದುವರಿಸಿದ್ದಾರೆ. ಈ ಮಧ್ಯೆ  ಅರುಣ್...
- Advertisement -
error: Content is protected !!