ಬೆಂಗಳೂರು: ಕೋವಿಡ್-19 ಚಿಕಿತ್ಸಾ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.
ಕೊರೋನಾ ಚಿಕಿತ್ಸಾ ಉಪಕರಣಗಳ ಖರೀದಿಯಲ್ಲಿ ಸಚಿವರು ಮತ್ತು ಅಧಿಕಾರಿಗಳು 2000 ಕೋಟಿ ರೂ. ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಶ್ರೀರಾಮುಲು 323 ಕೋಟಿ ರೂ. ಮಾತ್ರ ನಾವು ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಇನ್ನೊಬ್ಬ ಮಂತ್ರಿ 33 ಕೋಟಿ ರೂ. ಮಾತ್ರ ಅಂತ ಹೇಳುತ್ತಾರೆ. ಹೀಗಿರುವಾಗ ಯಾವುದು ಸತ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನನ್ನ ಪ್ರಕಾರ, ಆರೋಗ್ಯ ಇಲಾಖೆ 700 ಕೋಟಿ ರೂ, ಬಿಬಿಎಂಪಿ 200 ಕೋಟಿ ರೂ., ಜಿಲ್ಲಾಡಳಿತ 700 ಕೋಟಿ ರೂ., ಕಾರ್ಮಿಕ ಇಲಾಖೆ 1000 ಕೋಟಿ ರೂ., ವೈದ್ಯಕೀಯ ಇಲಾಖೆ, 815 ಕೋಟಿ ರೂ., ಹಿಂದುಳಿದ ವಿಭಾಗ ಮತ್ತು ಅಲ್ಪ ಸಂಖ್ಯಾತ ಇಲಾಖೆ 1000 ಕೋಟಿ ರೂ. ಖರ್ಚು ಮಾಡಿದ್ದೇವೆ ಅಂತ ಅವರೇ ಹೇಳಿದ್ದಾರೆ. ಆಹಾರ ಇಲಾಖೆ, ಮಹಿಳಾ ಮಕ್ಕಳ ಇಲಾಖೆ 500 ಕೋಟಿ ರೂ., ಕೊವಿಡ್ ಆರೈಕೆ ಕೇಂದ್ರಕ್ಕೆ 160 ಕೋಟಿ ರೂ., ಕೇಂದ್ರ ಖರೀದಿಸಿದ್ದು 200 ಕೋಟಿ, ಒಟ್ಟು 4160 ಕೋಟಿ ರೂ. ಖರ್ಚು ಮಾಡಿದ್ದಾರೆ. ಇವುಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಳ ಮಾಡಿ ಖರೀದಿಸಿದ್ದಾರೆ. ಇದರಲ್ಲಿ 2000 ಕೋಟಿ ರೂ. ಅಧಿಕಾರಿಗಳು ಹಾಗೂ ಸಚಿವರು ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೊರೋನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ 2000 ಕೋಟಿ ರೂ. ಅವ್ಯವಹಾರ ಆರೋಪ
Follow Us