ಬೆಂಗಳೂರು: ಮಾರ್ಚ್’ನಿಂದ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 27 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಿದ್ದು ಈ ಬಂಡವಾಳ ಕನಿಷ್ಠ 46 ಸಾವಿರ ಉದ್ಯೋಗ ಸೃಷ್ಟಿಸುವ ಭರವಸೆ ಇದೆ ಎಂದು ಕರ್ನಾಟಕ ಸರ್ಕಾರ ಬುಧವಾರ ಹೇಳಿದೆ.
ಇದರಲ್ಲಿ 37 ಯೋಜನೆಗಳಿಗೆ ಈಗಾಗಲೇ ಸ್ಥಳಪರಿಶೀಲನಾ ಸಮಿತಿ ಅನುಮತಿ ನೀಡಿದ್ದು, ಇದರಿಂದ ಅಂದಾಜು 1981.4 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಕಾರ್ಯಾರಂಭ ಮಾಡಲಿದ್ದು 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.
ಲಾಕ್ ಡೌನ್ ಬಳಿಕ ಕರ್ನಾಟಕ ಸರ್ಕಾರ ಉದ್ಯೋಗ ಸೃಷ್ಟಿ ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ ರೂಪಿಸಿತ್ತು.
ರಾಜ್ಯ ಸರ್ಕಾರದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಮಿತಿ 85 ಪ್ರೊಜೆಕ್ಟ್ ಗಳಿಗೆ ಅನುಮತಿ ನೀಡಿದ್ದು, 6136 ಕೋಟಿ ರೂಪಾಯಿ ವೆಚ್ಚದ ಈ ಕಂಪನಿಗಳು ಅಂದಾಜು 10 ಸಾವಿರ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ.
ಜೆಎಸ್ಡಬ್ಲು ಸಂಸ್ಥೆ 13.026 ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಮೆಟಲ್ ಕಂಪನಿ ಆರಂಭಿಸಲು ಚಿಂತನೆ ನಡೆಸಿದ್ದರೇ, ಸೈಮನ್ಸ್ ಹೆಲ್ತ್ ಕೇರ್ ಸಂಸ್ಥೆ, ಸಂಶೋಧನಾ ಸೆಂಟರ್ವೊಂದನ್ನು 1,085 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದೆ.
ಇನ್ನು ಪ್ರಮುಖ ಐಟಿ ಸಂಸ್ಥೆ ಟಾಟಾ ಕನ್ಸಲ್ಟಂನ್ಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 495 ಕೋಟಿ ರೂಪಾಯಿ ವೆಚ್ಚದಲ್ಲಿ 38.19 ಎಕರೆ ಪ್ರದೇಶದಲ್ಲಿ ಐಟಿ ಹಬ್ ನಿರ್ಮಿಸಲು ಸಿದ್ಧತೆ ನಡೆಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ರಾಜ್ಯದಲ್ಲಿ 27 ಸಾವಿರ ಕೋಟಿ ಬಂಡವಾಳ ಹೂಡಿಕೆ, 46 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ
Follow Us