newsics.com
ಬೆಂಗಳೂರು: ರಾಜ್ಯದಲ್ಲಿ ಬುಧವಾರ (ಮಾ.3) ಹೊಸದಾಗಿ 528 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,52,565 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಮೂವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,346 ಕ್ಕೆ ಏರಿದೆ. 413 ಮಂದಿ ಗುಣಮುಖರಾಗಿದ್ದು, 9,34,143 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಪ್ರಸ್ತುತ ಸಕ್ರಿಯ ಪ್ರಕರಣಗಳು 6057 ಇದ್ದು, 116 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡಾವಾರು 0.77 ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ.0.56 ರಷ್ಟಿದೆ.
ಯುಕೆಯಿಂದ 200 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ 64 ಜನಕ್ಕೆ ಪಾಸಿಟಿವ್ ಬಂದಿದೆ. ಸೋಂಕಿತರ ಸಂಪರ್ಕದಲ್ಲಿರುವ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದ್ದು, 25 ಜನರಿಗೆ ರೂಪಾಂತರ ಕೊರೋನಾ ಹರಡಿದೆ.
ರಾಜ್ಯಾದ್ಯಂತ ಕೊರೋನಾ ಲಸಿಕಾ ಅಭಿಯಾನ 2.0ರ 3ನೇ ದಿನವಾದ ಇಂದು 9903 ಹಿರಿಯ ನಾಗರಿಕರು, 1350 ಮಂದಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೇರಿ ಈವರೆಗೆ 15,294 ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಮೊದಲ ಡೋಸ್ನ ಆರೋಗ್ಯ ಕಾರ್ಯಕರ್ತರು ಇಂದು 767, 2ನೇ ಡೋಸ್ 2082, ಮುಂಚೂಣಿ ಕಾರ್ಯಕರ್ತರು 1191 ಮಂದಿ ಲಸಿಕೆ ಪಡೆದಿದ್ದು, ಒಟ್ಟಾರೆಯಾಗಿ 10,046 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.