newsics.com
ಬೆಂಗಳೂರು: ರಾಜ್ಯದಲ್ಲಿ ಇಂದು 911 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,16,256 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 11 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 12,062 ಸೋಂಕಿತರು ಸಾವನ್ನಪ್ಪಿದ್ದಾರೆ. 8,91,095 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, 13,080 ಜನ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 209 ಮಂದಿ ಐಸಿಯುನಲ್ಲಿದ್ದಾರೆ.
ಬೆಂಗಳೂರಿನಲ್ಲಿ 542 ಜನರಿಗೆ ಕೊರೋನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 3,86,599 ಕ್ಕೆ ಏರಿಕೆಯಾಗಿದೆ. 8 ಮಂದಿ ಸೋಂಕಿತರು ಇಂದು ಸಾವನ್ನಪ್ಪಿದ್ದು, ಇದುವರೆಗೆ 4299 ಜನ ಮೃತಪಟ್ಟಿದ್ದಾರೆ. 3,73,724 ಜನ ಬಿಡುಗಡೆಯಾಗಿದ್ದು, 8575 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ 4, ಬಳ್ಳಾರಿ11, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 542, ಬೀದರ್ 7, ಚಾಮರಾಜನಗರ 11, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 9, ಚಿತ್ರದುರ್ಗ 21, ದಕ್ಷಿಣ ಕನ್ನಡ 18, ದಾವಣಗೆರೆ 15, ಧಾರವಾಡ 17, ಗದಗ 04, ಹಾಸನ 34, ಹಾವೇರಿ 3, ಕಲಬುರಗಿ 12, ಕೊಡಗು 7, ಕೋಲಾರ 9, ಕೊಪ್ಪಳ 3, ಮಂಡ್ಯ 19, ಮೈಸೂರು 40, ರಾಯಚೂರು 5, ಶಿವಮೊಗ್ಗ 12, ತುಮಕೂರು 20, ಉಡುಪಿ 1, ಉತ್ತರ ಕನ್ನಡ 11, ವಿಜಯಪುರ 5, ಯಾದಗಿರಿಯಲ್ಲಿ 1 ಪ್ರಕರಣಗಳು ದಾಖಲಾಗಿವೆ.
ಹೆಚ್ಚಿನ ಮಾಹಿತಿಗಾಗಿ: 27-12-2020 HMB Kannada
ಇಸ್ರೇಲ್’ನಲ್ಲಿ ಮೂರನೇ ಬಾರಿ ಲಾಕ್ ಡೌನ್ ಘೋಷಣೆ
ಎಮ್ಮೆಗಳ ಅಪಹರಣ: 50 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು
ದೇಶದಲ್ಲಿ ಅತಿ ಕಡಿಮೆ ಕೊರೋನಾ ಕೇಸ್; 24 ಗಂಟೆಯಲ್ಲಿ 18732 ಪ್ರಕರಣ, 279 ಮಂದಿ ಬಲಿ