newsics.com
ಬೆಂಗಳೂರು: ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾದ ಬೆನ್ನಲ್ಲೇ ಇದೀಗ ಸಿಸಿಬಿ ಕಸ್ಟಡಿ ಕೂಡ ಮುಂದುವರೆದಿದೆ.
ಸಿಸಿಬಿ ಕೋರಿಕೆ ಮೇರೆಗೆ 1ನೇ ಎಸಿಎಂಎಂ ನ್ಯಾಯಾಲಯ ನಟಿ ರಾಗಿಣಿಯನ್ನು ಸೆಪ್ಟೆಂಬರ್ 14 ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಸೋಮವಾರದವರೆಗೆ ರಾಗಿಣಿ ಸಿಸಿಬಿ ಕಸ್ಟಡಿಯಲ್ಲಿರಲಿದ್ದು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ರಾಗಿಣಿ ಮಾತ್ರವಲ್ಲದೇ ಈ ಪ್ರಕರಣದ ಒಟ್ಟು 6 ಆರೋಪಿಗಳನ್ನು ನ್ಯಾಯಾಲಯ ಸಿಸಿಬಿ ವಶಕ್ಕೆ ನೀಡಿದೆ.
ಸೆ.14 ರವರೆಗೆ ರಾಗಿಣಿ ಸೇರಿ 6 ಆರೋಪಿಗಳು ಸಿಸಿಬಿ ಕಸ್ಟಡಿಗೆ
Follow Us