newsics.com
ಚಾಮರಾಜನಗರ: ಸಣ್ಣ ಸಣ್ಣ ಗೂಡಿನಲ್ಲಿ ಬಂಧಿಸಿ ಇಡಲಾಗಿದ್ದ 60 ಮಂಗಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಮುಕ್ತಗೊಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದೆ.
ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತಿಯೊಬ್ಬರು ಈ ಚಿತ್ರವನ್ನು ಶೇರ್ ಮಾಡಿದ್ದರು. ಬೆಳೆಗೆ ಹಾನಿ ಮಾಡುವ ಮಂಗಗಳನ್ನು ಹಿಡಿಯಲು ಗ್ರಾಮಸ್ಥರು ವ್ಯಕ್ತಿಯೊಬ್ಬರಿಗೆ 30,000 ರೂಪಾಯಿ ಪಾವತಿಸಿದ್ದರು. ಅದರಂತೆ ಮಂಗಳನ್ನು ಹಿಡಿದು ಗೂಡಿನಲ್ಲಿ ಇರಿಸಲಾಗಿತ್ತು.
ಮಂಗಗಳಿಗೆ ಮೂರು ದಿನಗಳಿಂದ ಆಹಾರ ಮತ್ತು ನೀರು ಕೊಟ್ಟಿರಲಿಲ್ಲ.
ಕಳೆದ ತಿಂಗಳು ಹಾಸನದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಮಂಗಗಳ ಮಾರಣ ಹೋಮವೇ ನಡೆದಿತ್ತು.