ಸೋಮವಾರಪೇಟೆ (ಕೊಡಗು): ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದಲ್ಲಿ ಏಳು ಹಸುಗಳು ಸಾವನ್ನಪ್ಪಿವೆ.
ಹಸುಗಳ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ ಕಾಫಿ ತೋಟಕ್ಕೆ ಬರುತ್ತವೆ ಎಂಬ ಕಾರಣಕ್ಕೆ ಬಾಳೆಹಣ್ಣಿನಲ್ಲಿ ವಿಷ ಬೆರೆಸಿ ಹಸುಗಳನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿ ಅಕ್ಕಪಕ್ಕದ ಗ್ರಾಮದ ನೂರಾರು ಜನರು ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಸುಗಳನ್ನು ಕಳೆದುಕೊಂಡ ಮಾಲೀಕರು ವ್ಯವಸ್ಥಾಪಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಸುಗಳ ಮೃತದೇಹಗಳನ್ನು ಟ್ರಾಕ್ಟರ್ ಸಹಾಯದಿಂದ ಎಸ್ಟೇಟ್ ಒಳಗಿನ ಚರಂಡಿಗೆ ಹಾಕಲಾಗಿದೆ. ತೋಟದೊಳಗೆ ಹಸುಗಳು ಸತ್ತು ಬಿದ್ದಿದ್ದು ಅವನ್ನು ಗುಂಡಿಗೆ ಹಾಕಿದ್ದೇವೆ ಎಂದು ತೋಟದ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ. ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಧಾವಿಸಿ ತೋಟದ ವ್ಯವಸ್ಥಾಪಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯೂರೋಪಿಯನ್ ರಾಷ್ಟ್ರಗಳಲ್ಲಿ ಮಿಂಕ್ ಅಂದ್ರೆ ಭಾರೀ ಭಯ!