ರಾಮನಗರ: ಇಲ್ಲಿನ ಐಜೂರಿನ ಬಾಲಕಿಯರ ಬಾಲಮಂದಿರದಲ್ಲಿ ಎಂಟು ಬಾಲಕಿಯರು ಪರಾರಿಯಾಗಿದ್ದು, ಈ ಪೈಕಿ ಓರ್ವ ಬಾಲಕಿ ಸಿಕ್ಕಿಬಿದ್ದಿದ್ದಾಳೆ.
ಬಾಲಮಂದಿರದಲ್ಲಿ ಮಂಗಳವಾರ ರಾತ್ರಿ 11.30ರ ಸುಮಾರಿಗೆ 15 ಅಡಿ ಗೋಡೆ ಹಾರಿ 8 ಬಾಲಕಿಯರು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈಕೆಯನ್ನು ವಿಚಾರಿಸಿದರೂ ತಪ್ಪಿಸಿಕೊಂಡ ಇತರ ಬಾಲಕಿಯರ ಸುಳಿವು ಸಿಕ್ಕಿಲ್ಲ.
ಕಟ್ಟಡದ ಒಳಭಾಗದ ಸುಮಾರು 15 ಅಡಿ ಎತ್ತರದ ಗೋಡೆಯನ್ನು ಹಾರಿ ಮುಖ್ಯದ್ವಾರಕ್ಕೆ ಬಂದಿರುವ ಬಾಲಕಿಯರು, ನಂತರ ಗೇಟ್ ಮೂಲಕ ಹೊರಬಂದಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಪತ್ತೆಯಾದ ಬಾಲಕಿಯರು ಈ ಮೊದಲು ಚಿಂದಿ ಆಯುತ್ತಿದ್ದರು ಎನ್ನಲಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
4 ಸರ್ಕಾರಿ ಶಾಲೆ ದತ್ತು ಪಡೆದ ಸ್ಯಾಂಡಲ್ವುಡ್ ಬಾದ್’ಷಾ
ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ಬಾಲ ಮಂದಿರದಿಂದ ಇಬ್ಬರು ಬಾಲಕಿಯರು ಪರಾರಿಯಾಗಿದ್ದ ಘಟನೆ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿತ್ತು. ನಂತರ ಈ ಇಬ್ಬರೂ ಸಿಕ್ಕಿದ್ದರು. ಇದೀಗ 7 ಬಾಲಕಿಯರು ನಾಪತ್ತೆಯಾಗಿದ್ದು, ಮತ್ತೆ ತಲೆನೋವು ತಂದೊಡ್ಡಿದ್ದಾರೆ. ಪರಾರಿಯಾಗಲು ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ (ಪ್ರಭಾರ) ಸಿ.ವಿ.ರಾಮನ್ ತಿಳಿಸಿದ್ದಾರೆ.