Priority
04KBL23
CABINET – CL HOLIDAY
ಬೆಂಗಳೂರು: ತಿಂಗಳ ನಾಲ್ಕನೇ ಶನಿವಾರ ರಜೆ ಪಡೆಯದ ಸರ್ಕಾರಿ ನೌಕರರಿಗೆ ಹತ್ತು ದಿನದ ಬದಲು 15 ದಿನಗಳ ಸಾಂದರ್ಬಿಕ ರಜೆ [ಸಿಎಲ್] ವಿಸ್ತರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ಶಿಕ್ಷಕರು ಒಳಗೊಂಡಂತೆ ಕೆಲವು ಸರ್ಕಾರಿ ನೌಕರರಿಗೆ ಕಡಿತಗೊಳಿಸಿದ್ದ ಸಾಂದರ್ಬಿಕ ರಜೆಯನ್ನು 10 ರಿಂದ 15 ದಿನಗಳಿಗೆ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧು ಸ್ವಾಮಿ ಮಾಹಿತಿ ನೀಡಿದರು.