newsics.com
ಕಲಬುರಗಿ: ಜಿಲ್ಲೆಯ ಅಫ್ಸಲ್’ಪುರ ತಾಲೂಕಿನ ಕತ್ತರಗಿ ಗಾಣಗಾಪುರದ ಬಳಿಯ ಸೇತುವೆ ಮುಳುಗುವ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ಭೀಮಾ ನದಿಗೆ ಹೆಚ್ಚುವರಿ ಮಳೆ ನೀರನ್ನು ಬಿಡಲಾಗಿದ್ದು, ಭೀಮಾ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ತಲೆದೋರಿದೆ.
ಅಫ್ಸಲ್’ಪುರ ತಾಲೂಕಿನ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ ಹೆಚ್ಚುವರಿ 1ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದೆ. ಅಲ್ಲದೆ ಮಹಾರಾಷ್ಟ್ರದ ಉಜನಿ ನೀರು ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ. ಇದರಿಂದ ಭೀಮಾ ನದಿಯ ವ್ಯಾಪ್ತಿಯಲ್ಲಿದ್ದ 8 ಬ್ಯಾರೇಜುಗಳು ಸಂಪೂರ್ಣ ಜಲಾವೃತವಾಗಿದೆ. ಇದರ ಪರಿಣಾಮ ಬ್ಯಾರೇಜುಗಳ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಕ್ಕಿ ಹರಿಯುತ್ತಿರುವ ನೀರಿನಿಂದ ಜನರಿಗೆ ಪ್ರವಾಹದ ಬೀತಿ ಉಂಟಾಗಿದೆ ಎನ್ನಲಾಗಿದೆ.
8 ಬ್ಯಾರೇಜ್ ಜಲಾವೃತ, ಗಾಣಗಾಪುರ ಸೇತುವೆಗೆ ಮುಳುಗಡೆ ಭೀತಿ
Follow Us