newsics.com
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 8 ಹೊಸ ಡಿಪ್ಲೊಮಾ ಕೋರ್ಸಗಳನ್ನು ಆರಂಭಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಗುರುವಾರ ತಿಳಿಸಿದ್ದಾರೆ.
ಈ ಮೂಲಕ ಇನ್ನು ಜನಸಾಮಾನ್ಯರ ಮಕ್ಕಳೂ ಕೂಡ ಆಟೋಮೇಷನ್, ರೊಬಾಟಿಕ್ಸ್, ಸೈಬರ್ ಸೆಕ್ಯುರಿಟಿಯಂತಹ ಉದಯೋನ್ಮುಖ ಕ್ಷೇತ್ರಗಳ ಉನ್ನತ ತಂತ್ರಜ್ಞಾನ ಶಿಕ್ಷಣ ಪಡೆಯಬಹುದಾಗಿದೆ.
ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯ ವೇತನ ನೀಡುತ್ತದೆ.
ರಾಜ್ಯದ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರ್ಜಿ ನೀಡಲಾಗುತ್ತದೆ. ಇಂದಿನಿಂದಲೇ (ಆ.12) ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊಸ ಕೋರ್ಸ್ ಗಳಾದ ಪರ್ಯಾಯ ಇಂಧನ ತಂತ್ರಜ್ಞಾನ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೆಟಾ, ಲಾಜಿಸ್ಟಿಕ್ ಟೆಕ್ನಾಲಜಿ, ಡೈರೆಕ್ಷನ್, ಸ್ಕ್ರೀನ್ ಪ್ಲೇ ಮತ್ತು ಟಿ.ವಿ ಪ್ರೊಡಕ್ಷನ್, ಆಟೋಮೇಷನ್ ಮತ್ತು ರೋಬಾಟಿಕ್ಸ್, ಸೈಬರ್ ಸೆಕ್ಯುರಿಟಿ, ಟ್ರಾವೆಲ್ ಟೂರಿಸಂ, ಫುಡ್ ಪ್ರೊಸೆಸಿಂಗ್ ಮತ್ತು ಪ್ರಿಸರ್ವೇಷನ್ ಆರಂಭಿಸಲಾಗುತ್ತಿದೆ.
2 ಲಕ್ಷ ರೂ.ಲೆಹೆಂಗಾ ತೊಟ್ಟು ಮಿಂಚಿದ ಬಾಲಿವುಡ್ ಬ್ಯೂಟಿ ಮಾಧುರಿ ದೀಕ್ಷಿತ್