ಬೆಂಗಳೂರು: ಬೆಂಗಳೂರು ವಿದ್ಯುತ್ ಕಂಪನಿಯ 24×7 ಸಹಾಯವಾಣಿ ಮುಂದಿನ 48 ಗಂಟೆಗಳ ಕಾಲ ಸ್ಥಗಿತವಾಗಲಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ 1912 ಸಹಾಯವಾಣಿ ಕಚೇರಿ ಸೀಲ್ಡೌನ್ ಆಗಿದೆ.
ಸಹಾಯವಾಣಿ ವಿಭಾಗದಲ್ಲಿ ಎಂಟು ಮಂದಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಮುಂದಿನ 48 ಗಂಟೆಗಳ ಕಾಲ 1912 ಸಹಾಯವಾಣಿ ಕಾರ್ಯನಿರ್ವಹಿಸುವುದಿಲ್ಲ. ಈ ನಂಬರ್ನಲ್ಲಿ ವಿದ್ಯುತ್ ಸಂಬಂಧಿತ ದೂರು ಸ್ವೀಕರಿಸುವುದಿಲ್ಲ. ಹೀಗಾಗಿ ಮುಂದಿನ 48 ಗಂಟೆಗಳ ಕಾಲ ವಿದ್ಯುತ್ ಸಂಬಂಧಿತ ದೂರುಗಳಿಗೆ ಸಾರ್ವಜನಿಕರು www.bescom.karnataka.gov.in ಜಾಲತಾಣ ಬಳಸಲು ಮನವಿ ಮಾಡಲಾಗಿದೆ. ಕೋವಿಡ್ ಆಸ್ಪತ್ರೆ ಪ್ರವೇಶ ನಿರಾಕರಣೆಗೆ ಸಂಬಂಧಿತ ಕುಂದು ಕೊರತೆಗಳಿಗೆ ವಾಟ್ಸಪ್ ಸಂಖ್ಯೆ 9480812450 ಅಥವಾ 1912covidhelpline@gmail.com ಗೆ ಮೇಲ್ ಮಾಡಿ ದೂರು ಸಲ್ಲಿಸಬಹುದು ಎಂದು ಬೆಸ್ಕಾಂ ಗ್ರಾಹಕ ವಿಭಾಗದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
8 ಮಂದಿಗೆ ಸೋಂಕು, ಬೆಸ್ಕಾಂ ಸಹಾಯವಾಣಿ 48 ಗಂಟೆ ಸೀಲ್ ಡೌನ್
Follow Us