Sunday, May 29, 2022

ದೇಶದ ಜನರಿಗೆ ಕೊರೋನಾ ಲಸಿಕೆ ಹಂಚಲು 80,000 ಕೋಟಿ ರೂ. ಬೇಕಾಗಿಲ್ಲ- ಕೇಂದ್ರ ಸ್ಪಷ್ಟನೆ

Follow Us

newsics.com
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ವಿತರಣೆಗೆ 80,000 ಕೋಟಿ ರೂ. ಬೇಕಾಗುತ್ತದೆ ಎಂಬ ಲೆಕ್ಕಾಚಾರ ಸರಿಯಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್ ಲಸಿಕೆಯನ್ನು ಖರೀದಿಸಲು ಮತ್ತು ಅದನ್ನು ದೇಶದ ಪ್ರತಿಯೊಬ್ಬರಿಗೂ ವಿತರಿಸಲು 80,000 ಕೋಟಿ ರೂ. ಮೊತ್ತದ ಅವಶ್ಯಕತೆ ಇದೆ. ಇಷ್ಟು ಹಣ ಭಾರತ ಸರ್ಕಾರದ ಬಳಿ ಇದೆಯೇ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಪ್ರಶ್ನಿಸಿದ್ದರು.
ಅದಾರ್ ಪೂನಾವಾಲಾ ಅವರ ಟ್ವಿಟ್ಟರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ‘80,000 ಕೋಟಿ ರೂ. ಲೆಕ್ಕಾಚಾರವನ್ನು ನಾವು ಒಪ್ಪುವುದಿಲ್ಲ. ಸರ್ಕಾರವು ಲಸಿಕೆ ಪರಿಣತರ ರಾಷ್ಟ್ರೀಯ ಸಮಿತಿಯನ್ನು ರಚಿಸಿದ್ದು, ಈಗಾಗಲೇ ಐದು ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಲಸಿಕೆ ಹಂಚಿಕೆ ಹಾಗೂ ಜನಸಂಖ್ಯೆಗೆ ಆದ್ಯತೆ ಮೇರೆಗೆ ಒದಗಿಸಲು ಅಗತ್ಯವಿರುವ ಹಣಕಾಸಿನ ಬಗ್ಗೆ ಚರ್ಚಿಸಿದ್ದೇವೆ. ಲಸಿಕೆಗಳಿಗೆ ಬೇಕಾದ ಮೊತ್ತದ ಬಗ್ಗೆ ಸಭೆಗಳಲ್ಲಿ ನಾವು ಸಮಾಲೋಚನೆ ನಡೆಸಿ ಲೆಕ್ಕಾಚಾರ ಹಾಕಿದ್ದೇವೆ. ಪ್ರಸ್ತುತ ಅಷ್ಟು ಹಣ ಸರ್ಕಾರದ ಬಳಿ ಇದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

newsics.com ಬೆಂಗಳೂರು: ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜನಸೇವೆ ಮಾಡುವ...

ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತು

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 11 ಗಂಟೆಗೆ ಮಾತನಾಡಲಿದ್ದಾರೆ. 88 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಿಂದಿನ ಪ್ರಧಾನಿಗಳು ದೇಶಕ್ಕಾಗಿ ಮಾಡಿದ ಸೇವೆಯನ್ನು...

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದು ಕೊಂಡ ಪತಿ!

newsics.com ಐರಿಷ್ : ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ ನಲ್ಲಿ ನಡೆದಿದೆ. ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ ಸಮಸ್ಯೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ...
- Advertisement -
error: Content is protected !!