Wednesday, July 6, 2022

ಶವ ಕೊಡಲು ಖಾಸಗಿ ಆಸ್ಪತ್ರೆಯಿಂದ 9 ಲಕ್ಷ ಡಿಮಾಂಡ್!

Follow Us

♦ ಐದೇ ದಿನದಲ್ಲಿ ಇದೇ ಆಸ್ಪತ್ರೆಯಲ್ಲಿ ತಂದೆ ತಾಯಿ ಮಗ ಸಾವು

ಬೆಂಗಳೂರು: ಹಣ ಕೊಟ್ಟರೆ ಮಾತ್ರ ಮೃತದೇಹ ಕೊಡುವುದಾಗಿ ನಗರದ ಖಾಸಗಿ ಆಸ್ಪತ್ರೆಯೊಂದು ಪಟ್ಟು ಹಿಡಿರುವ ಪರಿಣಾಮ ಮೃತರ ಸಂಬಂಧಿಕರು ಪರದಾಡುವಂತಾಗಿದೆ.
ಒಂಬತ್ತು ಲಕ್ಷ ನೀಡದಿದ್ದರೆ ಮೃತದೇಹ ನೀಡಲು ಸಾಧ್ಯವಿಲ್ಲ ಎಂದು ಮಾನವೀಯತೆಯನ್ನೇ ಮರೆತು ಕಳೆದೊಂದು ದಿನದಿಂದ ಖಾಸಗಿ ಆಸ್ಪತ್ರೆಯವರು ಸತಾಯಿಸುತ್ತಿದ್ದಾರೆ.
ನಗರದ ಮಹದೇವಪುರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಶವ ನೀಡಲು ಹಣಕ್ಕಾಗಿ ಸತಾಯಿಸುತ್ತಿದೆ. 46 ವರ್ಷದ ಮಹಿಳೆ ಬಿ. ಆಫ್ರೋಜ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಬೇಕೆಂದು ವೈದ್ಯರು ಹೇಳಿದ್ದರು. ಈ ಸುದ್ದಿ ಕೇಳಿದಾಕ್ಷಣ ಮಹಿಳೆಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೊರೋನಾಗೆ ಒಂದೇ ಕುಟುಂಬದ ಮೂವರ ಬಲಿ

ತಂದೆಯ ಅಂತ್ಯಕ್ರಿಯೆ ಮುಗಿಸಿಬಂದ ಮಗನಿಗೂ ಹೃದಯಾಘಾತವಾಗಿ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. ಗುರುವಾರ ಬೆಳಗ್ಗೆ 8.45ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕೂಡ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ಆ ಮೃತದೇಹ ಕೊಡಬೇಕಾದರೆ ಬಿಲ್ ಪಾವತಿ ಮಾಡುವಂತೆ ಆಸ್ಪತ್ರೆಯವರು ಒತ್ತಾಯಿಸಿದ್ದಾರೆ. ಮೃತದೇಹಕ್ಕಾಗಿ ಕುಟುಂಬದವರು ಆಸ್ಪತ್ರೆ ಬಳಿ ಗುರುವಾರದಿಂದ ಪರದಾಡುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...
- Advertisement -
error: Content is protected !!